28/01/2026
ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಮನೆ ನಿರ್ಮಿಸಿದ ಪ್ರಕರಣದಲ್ಲಿ ಪೊಲೀಸರ ತನಿಖೆ ಸ್ಫೋಟಕ ತಿರುವು ಪಡೆದಿದೆ. ಬಂಧಿತ ಆರೋಪಿಗಳಾದ ವಿಜಯ್ ಮತ್ತು ವಸೀಂ ಉಲ್ಲಾ ಸೇರಿದಂತೆ ನಾಲ್ವರ ಬ್ಯಾಂಕ್ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಬಡವರಿಂದ ತಲಾ 1 ರಿಂದ 2 ಲಕ್ಷ ರೂಪಾಯಿ ವಸೂಲಿ ಮಾಡಿ, ನಕಲಿ ಹಕ್ಕುಪತ್ರ ಮತ್ತು ದಾಖಲೆಗಳನ್ನು ನೀಡಿರುವುದು ವಿಚಾರಣೆಯಲ್ಲಿ ದೃಢಪಟ್ಟಿದೆ. ಮತ್ತೊಂದೆಡೆ, ಮನೆ ಕಳೆದುಕೊಂಡ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯೂ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಹಂತದಲ್ಲಿ ಸಲ್ಲಿಕೆಯಾಗಿದ್ದ 167 ಅರ್ಜಿಗಳ ಪೈಕಿ ಕೇವಲ 37 ಫಲಾನುಭವಿಗಳು ಮಾತ್ರ ಅರ್ಹರೆಂದು ಗುರುತಿಸಲಾಗಿದ್ದು, ಉಳಿದ 80ಕ್ಕೂ ಹೆಚ್ಚು ಅರ್ಜಿಗಳನ್ನು ದಾಖಲೆಗಳ ಕೊರತೆಯಿಂದ ತಿರಸ್ಕರಿಸಲಾಗಿದೆ. ಒತ್ತುವರಿದಾರರಲ್ಲಿ ಹೆಚ್ಚಿನವರು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂಬ ಅನುಮಾನ ವ್ಯಕ್ತವಾಗಿರುವುದರಿಂದ, ಜಿಲ್ಲಾಡಳಿತವು ಆಧಾರ್ ಮತ್ತು ಮತದಾರರ ಚೀಟಿಗಳ ಕಟ್ಟುನಿಟ್ಟಿನ ಮರುಪರಿಶೀಲನೆಗೆ ಮುಂದಾಗಿದೆ. ಇದರಿಂದಾಗಿ ನೈಜ ನಿರಾಶ್ರಿತರಿಗೆ ಸೂರು ಸಿಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
SANewsKarnataka KannadaNews Karnataka
sasthanatollgate sasthantollgateviralvideo UdupiNews exmilitry camondonews public narthanapurinewsdkshi dkshivakumar congressparty congress KannadaChannel media Update trendingvideo viralnews BtvNewsLive BtvNewsLive BTVDigitall KannadaNews Btventertainment KannadaLiveTV KannadaNewsChannell ಕನ್ನಡಸುದ್ದಿಗಳು